•  
  •  
  •  
  •  
Index   ವಚನ - 288    Search  
 
ಎನ್ನ ತನುಮನದೊಡೆಯ ನೀನೆ ಕಂಡಯ್ಯಾ. ಮನದ ಮಹಾದೇವ ನೀನಾದ ಬಳಿಕ ಇನ್ನು ನಾ ಮನವ ಕದ್ದೆಲ್ಲಿ ಬೈಚಿಡುವೆನಯ್ಯಾ? ಎನ್ನ ಮನೋವಾಕ್ಕಾಯದೊಡೆಯ ನೀನೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಶರಣು ಶರಣು!
Transliteration Enna tanumanadoḍeya nīne kaṇḍayyā. Manada mahādēva nīnāda baḷika innu nā manava kaddelli baiciḍuvenayyā? Enna manōvākkāyadoḍeya nīne kapilasid'dhamallikārjunayya, śaraṇu śaraṇu!