•  
  •  
  •  
  •  
Index   ವಚನ - 297    Search  
 
ಎನ್ನ ಸ್ವಸ್ಥಿರವೆಂಬ ಭೂಮಿಯಲ್ಲಿ ಒಂದು ಬೀಜ ಮೊಳೆದೋರಿ, ಮೂರು ಶಾಖೆಗಳಾಗಿ ಫಲವಾರಾದವು. ಮೂವತ್ತಾರರ ಮೇಲೆ ಇನ್ನೂರ ಹದಿನಾರು ಹಣ್ಣಾದವು. ಇಂತೀ ಫಲವನುಂಡುಂಡು ಮೀರಿ ಮೇಲಣದೊಂದು ಫಲದಲ್ಲಿ ಮೈಮರೆದು, ಕಪಿಲಸಿದ್ಧಮಲ್ಲಿಕಾರ್ಜುನನ ತತ್ವವಿದೆಂದರಿದು `ತತ್ವಮಸಿ'ಯಾದೆನು.
Transliteration Enna svasthiravemba bhūmiyalli ondu bīja moḷedōri, mūru śākhegaḷāgi phalavādavu. Mūvattārara mēle innūra hadināru haṇṇādavu. Intī phalavanuṇḍuṇḍu mīri mēlaṇadondu phaladalli maimaredu, kapilasid'dhamallikārjunana tatvavidendaridu `tatvamasi'yādenu.