ಎಪ್ಪತ್ತೆರಡು ಸಾವಿರ ಇಚ್ಛಾನಾಡಿಗಳಲ್ಲಿ ತಪ್ಪದೆ ಚರಿಸುವಾತನ
ಉಪಪ್ರಯೋಗ ಹಂಸನೆಂದೆಂಬೆ. ಆತನ ಪರಿಯದಂತಿರಲಿ.
ದ್ವಾರ ಒಂಬತ್ತರಲ್ಲಿ ನಾಯಕದ್ವಾರವನರಿಯಬೇಕು ಯೋಗಿಗಳು;
ಬೇರೆ ಜಪ ನಿಮಗೇಕೆ ಹೇಳಿರೆ.
`ಹಂಸ ಹಂಸ' ಎಂಬ ಜಪ ಸಂಪೂರ್ಣವಾಗಿ
ಅತ್ತಲಿತ್ತಲಿತ್ತೆರಕ್ಕೆ ಕಂಪಿಸದಿದ್ದಡೆ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನು ಕೂರ್ತು
`ತತ್ವಮಸಿ'ಯೆಂಬ ಭೈತ್ರದಿಂದೊಯ್ವನವ್ವಾ.
Transliteration Eppatteraḍu sāvira icchānāḍigaḷalli tappade carisuvātana
upaprayōga hansanendembe. Ātana pariyantirali.
Dvāra ombattaralli nāyakadvāravanariyabēku yōgigaḷu;
bēre japa nimagēke hēḷire.
`Hansa hansa' emba japa sampūrṇavāgi
attalittalitterakke kampisadiddaḍe,
kapilasid'dhamallikārjunayyanu kūrtu
`tatvamasi'yemba bhaitradindoyvanavvā.