Index   ವಚನ - 314    Search  
 
ಎಲ್ಲರ ಪರಿಯಲ್ಲ ಅವನ ಪರಿ ಹೊಸತು; ಕಾಲಾರರಲ್ಲಿ ನಡೆವ, ಕಿವಿಯಲ್ಲಿ ಉಂಬ, ಮೂಗಿನಲ್ಲಿ ನೋಡುವ, ಬಾಯಲ್ಲಿ ಭಾವಿಸುವ, ಕಣ್ಣಿನಲ್ಲಿ ಮೂರ್ಛೆಹೋಹ, ಬಂದುದನತಿಗಳೆವ, ಬಾರದುದ ತನ್ನದೆಂಬ; ಇಂಥಾ ವಿನೋದವಿಚಿತ್ರನವ್ವಾ, ಕಪಿಲಸಿದ್ಧಮಲ್ಲಿಕಾರ್ಜುನನು.