ಎಲೆ ಅಯ್ಯಾ, ಎನಗೆ ಜವ್ವನವೇರಿತ್ತಯ್ಯಾ,
ಹರೆಯ ಹತ್ತಿತ್ತಯ್ಯಾ,
ಪ್ರಾಯ ಸಮರೂಪಿಗೆ ಬಂದಿತ್ತಯ್ಯಾ.
ಜವ್ವನಕ್ಕೆ ಜಯವಂತನಿಲ್ಲ, ಹರೆಯಕ್ಕೆ ಹರುಷಿತನಿಲ್ಲ.
ಪ್ರಾಯಕ್ಕೆ ಪ್ರೌಢಿಗನಿಲ್ಲದೆ ಭ್ರಮೆಬಡುತ್ತಿದ್ದೇನಯ್ಯಾ.
ಜವ್ವನಿಗ ಜಯವ ಮಾಡಿದಡೆ ಆನು ಬದುಕುವೆನಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Ele ayya, enage javvanavērittayyā,
hareya hattittayya,
prāya samarūpige bandittayyā.
Javvanakke jayavantanilla, hareyakke haruṣitanilla.
Prāyakke sūcaneganillade bhramebaḍuttiddēnayyā.
Javvaniga jayava māḍidaḍe ānu badukuvenayyā,
kapilasid'dhamallināthayya।