•  
  •  
  •  
  •  
Index   ವಚನ - 324    Search  
 
ಎಲೆ ಅಯ್ಯಾ, ನಿಮ್ಮ ಬರವಿಂಗೆ ಕಣ್ಬೇಟಗೊಂಡೆನು. ಎಲೆ ಅಯ್ಯಾ, ನಿಮ್ಮ ಬರವಿಂಗೆ ಎನ್ನ ಮನವೆಂಬ ಮಂಚವ ಪಚ್ಚಡಿಸಿದೆ. ಎಲೆ ಅಯ್ಯಾ, ನಿಮ್ಮ ಬರವಿಂಗೆ ಚಿತ್ತ ಸುಯಿಧಾನಿಯಾಗಿದ್ದೇನೆ. ಎಲೆ ಅಯ್ಯಾ, ನಿಮ್ಮ ಬರವಿಂಗೆ ಜ್ಞಾನದ ಸೆರಗ ಹಾಸಿ ಆಸೆಬಡುತ್ತಿದ್ದೇನೆ. ಎಲೆ ಅಯ್ಯಾ, ನೀ ಬಂದು ವಿರತವಿಲ್ಲದೆ ಕೂಡಿ ನಿನ್ನವಳೆಂದೆನಿಸಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Transliteration Ele ayyā, nim'ma baraviṅge kaṇbēṭagoṇḍenu. Ele ayyā, nim'ma baraviṅge enna manavemba man̄cava paccaḍiside. Ele ayyā, nim'ma baraviṅge citta suyidhāniyāgiddēne. Ele ayyā, nim'ma baraviṅge jñānada seraga hāsi āsebaḍuttiddēne. Ele ayya, nī bandu viratavillade kūḍi ninnavaḷendenisā, kapilasid'dhamallikārjunayya.