ವಚನ - 382     
 
ಕಂಜಕರ್ಣಿಕೆ ನಿನ್ನ ಅಂಜನದ ನೇತ್ರವನು ಕುಂಜರನ ಮಸ್ತಕದ ಸುಧೆಯ ಕೂಪ ಭುಂಜಿಸುವ ಮಧುಕರನ ಕಂಜನಾಳದ ಸುದ್ದಿ ಅಜಲೋಕದಾರೈದ ಸುದ್ದಿಯನು ಓರಂತೆ ಅರಿದಾತ ತಾನು ನೀನಪ್ಪನೈ ಕಪಿಲಸಿದ್ಧಮಲ್ಲಿಕಾರ್ಜುನಾ.