ವಚನ - 384     
 
ಕಂಜದೊಳಗಣ ಹಳದಿ ರಂಜಿಸುವ ಭೇದಕ್ಕೆ ಅಂಜುತೈದಾರೆ ಸಕಲ ಯೋಗಿಗಳೆಲ್ಲ ಧಾತುಗೆಟ್ಟು ಹಳದಿರಿತಿ ಧಾತುವ ನುಂಗಿದಾತ ಶಿವಯೋಗಿ. ಈ ಯೋಗಿಯನಿತೀ ನಿಜ ನಿಷ್ಪತಿಯ ಓತೊಮ್ಮೆ ಅರಿದಡೆ, ಆತನೆ ಶಿವಯೋಗಿ ಕಪಿಲಸಿದ್ಧಮಲ್ಲಿಕಾರ್ಜುನಾ.