ಕಂಬುವಿನ ಭೇದದಲಿ ಅಂಬಿತ್ತು ಅಜಕೋಟಿ,
ಕಂಬುವಿಂ ಭವಿಸಿತ್ತು ಜಗವೆಲ್ಲವು.
ಆ ಕಂಬುಯೋಗಕ್ಕೆ ತಾನಿಂಬಪ್ಪ ತಾತ್ಪರ್ಯ
ಶಂಭು ನೀನಹೆ ಶುದ್ಧ ನೆಲೆ ತಾನದು.
ಸಂಭ್ರಮದ ಬಿಂಬದಿಂದೊಂಬತ್ತು ನಾಳದಲಿ
ತುಂಬಿಯಾಳಾಪದಾ ಮಧು ಪುಷ್ಪದ
ಸಂಭ್ರಮದ ಖೇಚರದ ಆನಂದರಚನೆಯ
ಶಂಭು ನೀನಾದೆ, ಕಪಿಲಸಿದ್ಧಮಲ್ಲೇಶ್ವರ.
Art
Manuscript
Music
Courtesy:
Transliteration
Kambuvina bhēdadali ambittu ajakōṭi,
kambuviṁ bhavisittu jagavellavu.
Ā kambuyōgakke tānimbappa tātparya
śambhu nīnahe śud'dha nele tānadu.
Sambhramada bimbadindombattu nāḷadali
tumbiyāḷāpada madhu puṣpada
sambhramada khēcarada ānandaracaneya
śambhu nīnāde, kapilasid'dhamallēśvara.