ವಚನ - 402     
 
ಕರಣಂಗಳ ಕಳೆದು ಇರವಿನ ಬ್ರಹ್ಮ ನಿಜದಲ್ಲಿ ನಿಂದಿತ್ತಯ್ಯಾ. ಆತ್ಮಸಂಗ ಸಂಯೋಗದ ಇರವು ನಿಮ್ಮಲ್ಲಿ ನಿಜವಾಯಿತ್ತಯ್ಯಾ. ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮ್ಮ ಚೆನ್ನಬಸವಣ್ಣನ ಕೃಪೆ ನಿಮ್ಮಿಂದ ಸಾಧ್ಯವಾಯಿತ್ತಯ್ಯಾ ಪ್ರಭುವೆ.