Index   ವಚನ - 415    Search  
 
ಕರ್ಮವನರಿತೆನ್ನ ನಿಃಕರ್ಮಿಯ ಮಾಡಯ್ಯಾ ಗುರುವೆ. ಈ ಕರ್ಮಕ್ಕಾನಾರೆನು ತಂದೆ. ಅಯ್ಯಾ, ಎನ್ನ ನಿಃಕರ್ಮಿಯ ಮಾಡಯ್ಯಾ ಗುರುವೆ. ಆನತ ಘನಗುರುವೆ ಕಪಿಲಸಿದ್ಧಮಲ್ಲಿನಾಥಾ, ಎನ್ನ ನಿನ್ನವರಂತೆ ಮಾಡಾ, ನಿಮ್ಮ ಧರ್ಮ.