ವಚನ - 418     
 
ಕರುಣ ಕಂಬನಿಯ ದೆಸೆದೆಸೆಗೆಟ್ಟ ವಾರುಧಿಯೊಳಗೆ ಮುಸುಕಿ ಮುಸುಕಿ ಮೋಹಿಸುತ್ತಿರ್ದೆಯಯ್ಯಾ. ದೆಸೆಗೆಟ್ಟ ಪಶುವಾನಿದ್ದೆ ಪಶು ಪಾಶಮೋಚನನು ನೀನಾದೆ. ಈ ಹಸುಳೆಯ ತೆಗೆದು ನಿನ್ನ ವಶಕ್ಕೆ ಇತ್ತ ಬಾಯೆಂದೆ, ಕರುಣಿ ಕಪಿಲಸಿದ್ಧಮಲ್ಲಿಕಾರ್ಜುನಾ.