ಕರುಣಿ, ಮಹಾದಾನಿ,
ನಿನ್ನವರಿಗೆ ನೀನು ಕರುಣ ಕಂದೆರೆವ ಭೇದವ,
ಅವರ ಮನದ ಮಸ್ತಕದಲ್ಲಿ
ನಿನ್ನ ಮಹಾಜ್ಯೋತಿ ಬೆಳಗುವ ಭೇದವ,
ಅರಿಯಬಹುದೆ ಎಲ್ಲರಿಗೆ,
ಅನಂಗವಿದಾರಣ ಕಪಿಲಸಿದ್ಧಮಲ್ಲಿಕಾರ್ಜುನಲಿಂಗವೆ,
ನಿನ್ನ ಕರುಣವುಳ್ಳವರಿಗಲ್ಲದೆ?
Transliteration Karuṇi, mahādāni,
ninnavarige nīnu karuṇa kandereva bhēdava,
avara manada mastakadalli
ninna mahājyōti beḷaguva bhēdava,
ariyabahude ellarige,
anaṅgavidāraṇa kapilasid'dhamallikārjunaliṅgave,
ninna karuṇavuḷḷavarigallade?