ವಚನ - 459     
 
ಕೂಟದ ರಚನೆಯ ಸಂದಳಿದು ನೋಟ ನಿಮ್ಮಲ್ಲಿ ನಟ್ಟು ಸಮಕಳೆ ಎಂದಪ್ಪುದಯ್ಯಾ, ಸಮರತಿ ಎಂದಪ್ಪುದಯ್ಯಾ. ಹಂಗ ಹರಿದು, ದಂದುಗ ಉಡುಗಿ ಎನ್ನನೆಂದಿಂಗೆ ಒಳಕೊಂಬೆಯೊ ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.