•  
  •  
  •  
  •  
Index   ವಚನ - 464    Search  
 
ಕೇಳವ್ವಾ ಕೆಳದಿ, ನಾನಿದ್ದ ಪರಿಗಳ ಹೇಳುವೆ ನಿನಗೆ; ಶಿಲೆಯ ಮೇಲೆ ಸೈವೆರಗಾಗಿ ತಲೆಯ ಬಿಟ್ಟಿದ್ದ ಪರಿಯ; ವಾಯುಭಕ್ಷಕಳಾಗಿದ್ದ ಪರಿಗಳ ನೋಡವ್ವಾ. ಆನಿದ್ದ ಪರಿಗಳ ಕಂಡು ಕರುಣಿಸಿ ಗಂಡನಾದನು ಎನ್ನ ಕಪಿಲಸಿದ್ಧಮಲ್ಲಿನಾಥದೇವರ ದೇವ ನೋಡವ್ವಾ.
Transliteration Kēḷavvā keḷadi, nānidda parigaḷu ninage; śileya mēle saiveragāgi taleya biṭṭidda pariya; vāyubhakṣakaḷāgidda parigaḷa nōḍavvā. Ānidda parigaḷa kaṇḍu karuṇisi gaṇḍanādanu enna kapilasid'dhamallināthadēvara dēva nōḍavvā.