•  
  •  
  •  
  •  
Index   ವಚನ - 468    Search  
 
ಕೋಗಿಲ ಶಬ್ದ ಕಿವಿಗೆ ಕೂಗಿ ಹೋಯಿತ್ತು ಕಂಡ ಕಂಡ ಪುರುಷನನಪ್ಪಲು ಅಪ್ಪಿನ ಸುಖ ಸಂತಾನವಾಯಿತ್ತೆನಗೆ. ಅಪ್ಪಿನ ಸುಖದ ಸಂತಾನದ ಬಗೆಯ ಕೇಳಲು ಕರಣಿಕ ಹೇಳಿದನಯ್ಯಾ ಮೂವತ್ತಾರು ಕುಮಾರರನು. ಆ ಕುಮಾರನ ಕೂಟದಲ್ಲಿರಲು, ಹೆತ್ತ ಮಕ್ಕಳ ಕೂಟವೆಂದಡೆ, ಹುಟ್ಟಿದರಯ್ಯಾ, ಇನ್ನೂರ ಹದಿನಾರು ರಾಜಕುಮಾರರು. ಆ ಕುಮಾರರ ಚೆಲುವಿಕೆಯ ಕಂಡು, ಆ ಚೆಲುವಿಕೆಯ ಮಕ್ಕಳ ನೆರೆಯಲು ಪತಿವ್ರತೆಯೆನಿಸಿಕೊಂಡು, ಒಬ್ಬನೆ ಪುರುಷನೆಂದಳಯ್ಯಾ ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮ್ಮ ಹೆಂಡತಿ.
Transliteration Kōgila śabda kivige kūgi hōyittu kaṇḍa kaṇḍa puruṣananappalu appina sukha santānavāyittenage. Appina sukhada santānada bageya kēḷalu karaṇika hēḷidanayyā mūvattāru kumāraranu. Ā kumārana kūṭadalliralu, hetta makkaḷa kūṭavendaḍe, huṭṭidarayya, innūra hadināru rājakumāraru. Ā kumārara celikeya kaṇḍu, ā celikeya makkaḷa nereyalu pativrateyenisikoṇḍu, obbane puruṣanendaḷayyā kapilasid'dhamallināthayya, nim'ma heṇḍati.