•  
  •  
  •  
  •  
Index   ವಚನ - 511    Search  
 
ಘರ್ಜನೆಯಿಂ ಸಿಡಿಲು ಅಡಸಿ ಬಂದು ಪೊಯ್ವುತ್ತಿರಲಿ, ಪೊಯ್ಯವೊಲ್ಲದೆ ವಾಯವಿಮಾನಂಗಳಿಂದ [ಎತ್ತಿಕೊಳ್ಗೆ] ಎತ್ತಿಕೊಂಡಡೆ, ಮನವಿಚ್ಛಂದವಾಗದೊಂದೆಯಂದದಲ್ಲಿಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Gharjaneyiṁ siḍilu aḍasi bandu poyvuttirali, poyyavollade vāyavimānagaḷinda [ettikoḷge] ettikoṇḍaḍe, manavi cchandavāgadondeḍeyallippantappa nim'madondu samatāguṇa ennanendu bandu poddippudu hēḷā, kapilasid'dhamallikārjunā.