•  
  •  
  •  
  •  
Index   ವಚನ - 536    Search  
 
ಜಲವಿಡಿಯ ಪರಿವಿಡಿಯ ಪದವಿಡಿಯ ಭವವಿಡಿಯ ಒಲವನೊಲ್ಲೆನು ಅವನಕಾಂಕ್ಷೆ ಇಲ್ಲ. ಗುರುಕರುಣದಾಜ್ಞೆಯಲಿ ಪರುಷಲಿಂಗವ ಪಡೆದು ಒಳಹೊರಗೆನ್ನದೆ ಭೇದಿಸುವೆನು ಶ್ರೀಗುರು ಚೆನ್ನಬಸವಣ್ಣ ಸಹರೂಪದ ಭಾವಶುದ್ಧನಪ್ಪೆ ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Jalaviḍiya pariviḍiya padavi bhavaviḍiya olavanollenu avanakāṅkṣe illa. Gurukaruṇadājñeyali paruṣaliṅgava paḍedu oḷahoragennade bhēdisuvenu śrīguru cennabasavaṇṇa saharūpada bhāvaśud'dhanappe kāṇā kapilasid'dhamallikārjunā.