ತನ್ನ ಮರೆದು ನಿನ್ನ ರೂಪಾದವರ
ನಿನ್ನವರೆ ಪ್ರಾಣವೆಂದೆಂಬವರ
ನಿನ್ನವರೆ ಮೂರ್ತಿಧ್ಯಾನದಲ್ಲಿ ಮೂರ್ಛೆವೋದವರ
ನಿನ್ನವರೆ ಕೀರ್ತಿಸುವವರ
ನೀನೆಂದೆ ನಿನ್ನವರನರ್ಚಿಸುವವ[ರ] ಸಂಗಸುಖದೊಳಗೆ
ಎನ್ನನಿರಿಸಯ್ಯಾ ನಿಮ್ಮ ಧರ್ಮ,
ಅನಂಗವಿದಾರಣ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Tanna maredu ninna rūpādavara
ninnavare prāṇavendembavara
ninnavare mūrtidhyānadalli mūrchevōdavara
ninnavare kīrtisuvavara
nīnende ninnavaranarcisuvava[ra] saṅgasukhadoḷage
ennanirisayya nim'ma dharma,
anaṅgavidāraṇa, kapilasid'dhamallikārjunā.