ತನುಮಧ್ಯದಲಿ ಲಿಂಗತ್ರಯವ ನೆಲೆಗೊಳಿಸಿದ ಶ್ರೀಗುರು.
ಪ್ರಸಾದಲಿಂಗತ್ರಯಕ್ಕೆ ಲೋಭವಿಲ್ಲದವರನೇನೆಂಬೆನಯ್ಯಾ?
ಲಿಂಗತ್ರಯ ನೆಲೆಗೊಂಡ ಹಾಗೆ
ಪ್ರಸಾದ ಲಿಂಗತ್ರಯ ನೆಲೆಗೊಳ್ಳದಿರ್ದಡೆ
ಅವರು ಗುರ್ವಾಜ್ಞೆಗೆ ದೂರವೆಂಬೆ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಎನಗೆ ನಿಮ್ಮ ತೋರಿದ ಬಸವಣ್ಣನಾಣೆ.
Transliteration Tanumadhyadali liṅgatrayava nelegoḷisida śrīguru.
Prasādaliṅgatrayakke lōbhavilladavaranēnembenayyā?
Liṅgatraya nelegoṇḍa hāge
prasāda liṅgatraya nelegoḷḷadirdaḍe
avaru gurvājñege dūravembe.
Kapilasid'dhamallikārjunayya,
enage nim'ma tōrida basavaṇṇanāṇe.