•  
  •  
  •  
  •  
Index   ವಚನ - 585    Search  
 
ತನುವಿಡಿದು ದಾಸೋಹವ ಮಾಡಿ ಗುರುಪ್ರಸಾದಿಯಾದ ಬಸವಣ್ಣ. ಮನವಿಡಿದು ದಾಸೋಹವ ಮಾಡಿ ಲಿಂಗಪ್ರಸಾದಿಯಾದ ಬಸವಣ್ಣ. ಧನವಿಡಿದು ದಾಸೋಹವ ಮಾಡಿ ಜಂಗಮಪ್ರಸಾದಿಯಾದ ಬಸವಣ್ಣ. ಇಂತೀ ತ್ರಿವಿಧವಿಡಿದು ದಾಸೋಹವ ಮಾಡಿ ಸದ್ಗುರು ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣ ಸ್ವಯಪ್ರಸಾದಿಯಾದನಯ್ಯಾ ಬಸವಣ್ಣ.
Transliteration Tanuviḍidu dāsōhava māḍi guruprasādiyāda basavaṇṇa. Manaviḍidu dāsōhava māḍi liṅgaprasādiyāda basavaṇṇa. Dhanaviḍidu dāsōhava māḍi jaṅgamaprasādiyāda basavaṇṇa. Intī trividhaviḍidu dāsōhava māḍi sadguru kapilasid'dhamallikārjunayya, nim'ma śaraṇa svayaprasādiyādanayyā basavaṇṇa.