ವಚನ - 618     
 
ತ್ರಾಹಿಮಾಂ ಪರಮೇಶ್ವರ ಜಯ ಭಕ್ತಿಜ್ಞಾನಮಾಕಾರ ನೀನೆಯಯ್ಯ ಚೆನ್ನಬಸವಣ್ಣ. ಏಕೋದೇವ ದೇವಧರ್ಮ ಧರ್ಮಗುಣ ಗುಣಪ್ರಕಾಶ ಪ್ರಕಾಶ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ. ನಿಮ್ಮಿಂದ ಪ್ರಾಣಲಿಂಗಸಂಬಂಧವಾಗಿ ನಿಮಗೆ ನಮೋ ನಮೋ ಎನುತಿರ್ದೆನಯ್ಯಾ ಚೆನ್ನಬಸವಣ್ಣ.