•  
  •  
  •  
  •  
Index   ವಚನ - 620    Search  
 
ತ್ರಿಭುವನದಲ್ಲಿ ನಿನ್ನ ಹೊಲಬು ನಿತ್ಯವಾಯಿತ್ತು. ಭಕ್ತಿ ಗಂಭೀರವೆಂಬ ಹೊಳೆ ಹರಿಯಿತ್ತು, ಸುಲಭವೆ ಎಲ್ಲರಿಗೆ ಲೋಕದವರು? ಉಂಬಂತೆ ಉಂಬವರಿಗೆ ಲೋಕದವರು ಬಹಂತೆ ಬಪ್ಪುವರಿಗೆ ಭಕ್ತಿ ಶರಧಿಯಲ್ಲಿ ಬಿದ್ದು ಮಜ್ಜನ ಮಾಡಬಹುದೆ? ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Tribhuvanadalli ninna holabu nityavāyittu. Bhakti gambhīravemba hoḷe hariyittu, sulabhave ellarigū lōkadavaru? Umbante umbavarige lōkadavaru bahante bappuvarige bhakti śaradhiyalli biddu majjana māḍabahude? Kapilasid'dhamallikārjunā.