ತೋರಿಪ್ಪ ಒಳಗೊಂದು ಮೀರಿಹ ಎಂಟು,
ಗಾರು ಮಾಡುತ್ತವೆ ವರ್ಗವಾ ಮೀರಿ ಮೀರಿ,
ನೂರೆಂಟರ ಕಳಾಪ್ರವೇಶದಲ್ಲಿ
ತೋರಿಪ್ಪುದು ಧಾತುವೇಳು
ಅನಾದಿ ಮೂರುತಿ
ಕಪಿಲಸಿದ್ಧಮಲ್ಲೇಶ್ವರಯ್ಯ
ನಿನ್ನ ನೆನಹಿನ ಮೂರುತಿಯ ಮೂಲ.
Transliteration Tōrippa oḷagondu mīriha eṇṭu,
gāru māḍuttave vargavā mīri mīri,
nūreṇṭara kaḷāpravēśadalli
tōrippudu dhātuvēḷu
anādi mūruti
kapilasid'dhamallēśvarayya
ninna nenahina mūrutiya mūla.