ವಚನ - 624     
 
ದಾನಿ ಮುನ್ನಾನಲ್ಲ, ಏನು ಗುಣವೆನ್ನಲ್ಲಿ? ನೀ ಕಾಡಲ್ಕೆ ಎನಗೆ ತೆರಹಿಲ್ಲವ್ವಾ. ದಾನವನು ಬೇಡಿದೆನು ಭಕ್ತಿ ಭಿಕ್ಷವ ನೀಡಿ ಅನಾದನಾದನು ಚೆನ್ನಬಸವಣ್ಣನು. ಕೇಳೆಲೆಗೆ ಮಾಯೆ, ನೀ ನನ್ನತ್ತ ಹೊದ್ದದಿರು ಗಾರುಮಾಡುವರು ನಿನ್ನನೆನ್ನ ನಿರ್ಮಾಯರು. ಕಾರುಣ್ಯಕರ ಕಪಿಲಸಿದ್ಧಮಲ್ಲೇಶ್ವರನ ಭಾವಶುದ್ಧದ ಸತ್ವವನು ವಿಡಿದು.