ವಚನ - 631     
 
ದೀಕ್ಷಾತ್ರಯದಲ್ಲಿ ವ್ಯಕ್ತನಾದೆ ಶಿಕ್ಷ ಸಂಬಂಧಿಸುವಲ್ಲಿ ಭೀತನಾದೆ ಮುಗ್ಧೆಯ ಕನಸಿನಲ್ಲಿ ಮುಕ್ತನಾದೆ ಧನ-ತನು-ಮನಂಗಳ ಮೂರ ಮರೆದವನ ತಾಮಸಂಗಳು ಹಲವನಳಿದವನ ರಜಂಗಳು ಕೆಲವನುಳಿದವನ ಭೇದಿಸಿ ಕಂಡೆ. ಅದೇನು ಗುಣ? ಅವ್ಯಯ ನಾನಾ ವಾಯಸ್ಥಾನದಲ್ಲಿ ಶುದ್ಧ ಸಂಗಮ ಪ್ರಯೋಗಿಸಿದ ಕಾರಣ! ದೀಕ್ಷೆಯಾಯಿತ್ತು ಕಾಯಕ್ಕೆ, ಶಿಕ್ಷೆಯಾಯಿತ್ತು ಸರ್ವಾಂಗಕ್ಕೆ ಸ್ವಾನುಭಾವವಾಯಿತ್ತು ಕರಣೇಂದ್ರಿಯ ಸರ್ವಕ್ಕೆ. ದೀಕ್ಷಾತ್ರಯವು ಸಂಬಂಧಿಸಿದ ಕಾರಣ ನೀ ನಾನಾದೆ, ಕಪಿಲಸಿದ್ಧಮಲ್ಲಿಕಾರ್ಜುನಾ.