ವಚನ - 667     
 
ನಡೆ-ನೋಟ-ಭಾವ-ದೃಷ್ಟಿ ಲಯವಾಯಿತ್ತು. ಗಮನ-ಗಾಂಭೀರ್ಯವಡಗಿತ್ತು ; ಕಾಲಕಂಠವಳಿಯಿತ್ತು. ಗಮನ-ಸುಮನವಡಗಿತ್ತು, ಕದಳಿ ಲೋಕದಳವಾಯಿತ್ತು. ಪ್ರಸಾದ ಸಂಬಂಧ ಬಲುಹಿನಲ್ಲಿ ನಿಂದಿತ್ತು. ಮಾತು ಮನವಾಯಿತ್ತು, ಅನುಭಾವವೈಕ್ಯವಾಯಿತ್ತು. ನಮ್ಮ ಕಪಿಲಸಿದ್ಧಮಲ್ಲಿನಾಥನಲ್ಲಿ ನಮ್ಮ ಚೆನ್ನಬಸವಣ್ಣನ ಪ್ರಾಣಲಿಂಗಸಂಬಂಧ ಪರಿಣಾಮದಲ್ಲಿ ನಿಂದಿತ್ತು.