ನಾದ ಬಿಂದುವಿನಲ್ಲಿ ಆದಿಬ್ರಹ್ಮನ ಕೂಡಿ
ವಾದ ಸಾದಾಖ್ಯಗಳನೊಡಗೂಡಿದ
ಆನಂದ ತುಂಬಿಗಳ ಭೇದ ಭೇದಿಯ ಕೂಡಿ,
ಮೋದ ಮೂವತ್ತಾರು ತತ್ತ್ವಂಗಳ ಭೇದಗಳ ಭೇದಿಸಿ,
ಅಕ್ಷರದ್ವಯದಲ್ಲಿ ತಾನು ಸಂಗಮವಾದ ನಿಶ್ಚಯದಲಿ;
ತವಕಿಸುವ ಕರಣವನು, ಹರಿವ ಪ್ರಪಂಚುವನು,
ಒಸರುವ ಬಿಂದುವನು ಪಸರಿಸುವ ಭೇದವನು
ದೆಸೆಗೆಟ್ಟು ಕಂಡೆ, ಕಪಿಲಸಿದ್ಧಮಲ್ಲೇಶ್ವರಾ.
Art
Manuscript
Music
Courtesy:
Transliteration
Nāda binduvinalli ādibrahmana kūḍi
vāda sādākhyagaḷanoḍagūḍida
ānanda tumbigaḷa bhēda bhēdiya kūḍi,
mōda mūvattāru tattvaṅgaḷa bhēdagaḷa bhēdisi,
akṣaradvayadalli tānu saṅgamavāda niścayadali;
tavakisuva karaṇavanu, hariva prapan̄cavanu,
osaruva binduvanu pasarisuva bhēdavanu
desegeṭṭu kaṇḍe, kapilasid'dhamallēśvarā.