ನೀನು ಸಕಲದಲ್ಲಿ ಸ್ವಾತ್ಮಿಸುವ ಭೇದವ
ನೀನು ನಿಃಕಲದಲ್ಲಿ ಪ್ರವೇಶಿಸುವ ಭೇದವ
ನೀನು ಸಕಲ ನಿಃಕಲಾತ್ಮಕವಾಗಿ ತೊಳಗಿ ಬೆಳಗುತಿಪ್ಪ ಭೇದವ
ಅರಿಯಬಹುದೆ ಎಲ್ಲರಿಗೆ?
ಆನಂದಸ್ಥಾನದಲ್ಲಿ ಬೆಳಗುತ್ತಿಪ್ಪ
ಅಕ್ಷರದ್ವಯದ ಭೇದವ
ಅನ್ಯರಿಗೆಂತರಿಯಬಹುದಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Nīnu sakaladalli svātmisuva bhēdava
nīnu niḥkaladalli pravēśisuva bhēdava
nīnu sakala niḥkalātmakavāgi toḷagi beḷagutippa bhēdava
ariyabahude ellarige?
Ānandasthānadalli beḷaguttippa
akṣaradvayada bhēdava
an'yarigentariyabahudayyā,
kapilasid'dhamallikārjunā.