•  
  •  
  •  
  •  
Index   ವಚನ - 755    Search  
 
ಪಾತಕರಟ್ಟಿ ಪುಣ್ಯಪುರುಷರಿಗರುಹುವಲ್ಲಿ ತಮ್ಮಪ್ಪಣೆಯೆ ಅಯ್ಯಾ? ಆರೂ ಅರಿಯದ ಬೋಧೆಯನರುಹಬೇಕೆಂಬಪೇಕ್ಷೆ ಲಿಂಗದಲ್ಲಿ ತೋರಿದುದು ಎನ್ನ ಸುಕೃತವಲ್ಲ ಎನ್ನ ಯೋಗದ ಬಲವಲ್ಲ ನಿಮ್ಮ ಪಾದದ ಮಹಾಕೃಪೆ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Pātakaraṭṭi puṇyapuruṣarigaruhuvalli tam'mappaṇeye ayyā? Ārū ariyada bōdheyanaruhabēkembapēkṣe liṅgadalli tōridudu enna sukr̥tavalla enna yōgada balavalla nim'ma pādada mahākr̥pe kāṇā, kapilasid'dhamallikārjunā.