ಪೂರ್ವದ ಜೀರ್ಣಲಿಂಗ ಮೈ ತೊರೆದಲ್ಲಿ
ದುಃಖವಿಲ್ಲಿಷ್ಟು ದೇವಾ.
ಪೂರ್ವದಮೃತಕಲಹದಲ್ಲಿಲ್ಲಿಷ್ಟು ದುಃಖ ದೇವಾ.
ದುಃಖದಿಂದಖಿಲಾಂಗ ವಹ್ನಿಕಣಗಳಾದವು ದೇವಾ,
ಇಂತಪ್ಪಗ್ನಿಕಣಕ್ಕೆ ನಿಮ್ಮ ವಿಲೋಕನವೆ ವೃಷ್ಟಿಧಾರೆ,
ಕಪಿಲಸಿದ್ಧಮಲ್ಲಿಕಾರ್ಜುನದೇವಾ.
Transliteration Pūrvada jīrṇaliṅga mai toredalli
duḥkhavilliṣṭu dēvā.
Pūrvadamr̥takalahadallilliṣṭu duḥkha dēvā.
Duḥkhadindakhilāṅga vahnikaṇagaḷādavu dēvā,
intappagnikaṇakke nim'ma vilōkanave vr̥ṣṭidhāre,
kapilasid'dhamallikārjunadēvā.