•  
  •  
  •  
  •  
Index   ವಚನ - 779    Search  
 
ಪ್ರಾಣಲಿಂಗ ಸಂಬಂಧಿಯಾದ ಬಳಿಕ ಪರಸ್ತ್ರೀ ಪರದ್ರವ್ಯವ ಮುಟ್ಟದಿರಬೇಕು. ಅಂಗಲಿಂಗ ಸಂಬಂಧಿಯಾದ ಬಳಿಕ ಸ್ತ್ರೀಸಂಗವ ತೊರೆಯಲೇಬೇಕು. ಪ್ರಸಾದಲಿಂಗ ಸಂಬಂಧವಾದ ಬಳಿಕ ಆಪ್ಯಾಯನವರಿಯಲೇಬೇಕು. ಸರ್ವಾಂಗಲಿಂಗ ಸಮ್ಮತ ಸಂಬಂಧಿಯಾದ ಬಳಿಕ ಸರ್ವವೂ ತಾವಾಗಿರಬೇಕು. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಇಂತಪ್ಪವರು ಸುಲಭರೆ? ಎತ್ತಾನಕೊಬ್ಬರಲ್ಲದೆ.
Transliteration Prāṇaliṅga sambandhiyāda baḷika parastrī paradravyava muṭṭadirabēku. Aṅgaliṅga sambandhiyāda baḷika strīsaṅgava toreyalēbēku. Prasādaliṅga sambandhavāda baḷika āpyāyanavariyalēbēku. Sarvāṅgaliṅga sam'mata sambandhiyāda baḷika sarvavū tā māḍida. Kapilasid'dhamallikārjunayya, intappavaru sulabhare? Ettānakobbarallade.