ವಚನ - 830     
 
ಭಕ್ತಿಯ ಕೂಟವಾಯಿತ್ತು ಬಸವಣ್ಣಂಗೆ. ಶಕ್ತಿಯ ಕೂಟವಾಯಿತ್ತು ಶಿವದಾಸಣ್ಣಂಗೆ. ಆಚಾರ ಕೂಟವಾಯಿತ್ತು ಏಲೇಶ್ವರದ ಕೇತಯ್ಯಂಗೆ. ಅರ್ಪಿತ ಕೂಟವಾಯಿತ್ತು ಚೆನ್ನಬಸವಣ್ಣಂಗೆ. ಐಕ್ಯ ಕೂಟವಾಯಿತ್ತು ಅನಿಮಿಷಂಗೆ. ಪ್ರಾಣಲಿಂಗ ಕೂಟವಾಯಿತ್ತು ನಿಮಗೆ ಕಪಿಲಸಿದ್ಧಮಲ್ಲಿನಾಥಯ್ಯಾ.