ಭಕ್ತಿಯ ಭಾವದ ಬಯಕೆಯ ಬಯಸುವೆ, ಅವಧಾರಯ್ಯಾ.
ಎನ್ನ ಮನ ನಿಮ್ಮ ನೆನೆವಂತೆ ಮಾಡಯ್ಯಾ.
ಎನ್ನ ಮನ ನಿಮ್ಮ ಶ್ರೀಪಾದವನಗಲದಂತೆ ಮಾಡು,
ಶ್ರೀ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Transliteration Bhaktiya bhāvada bayakeya bayasuve, avadhārayyā.
Enna mana nim'ma nenevante māḍayya.
Enna mana nim'ma śrīpādavanagaladante māḍu,
śrī kapilasid'dhamallikārjunayya.