ಭ್ರೂಮಧ್ಯದಿಂ ಮೇಲೆ ಒಪ್ಪಿಪ್ಪ ಕನ್ನಿಕೆಯ
ನಿನ್ನ ಜ್ಯೋತಿರ್ಮಯದ ಬೆಳಗ ತೋರಾ.
ಆ ಬೆಳಗಿನ ಬಳಗಂಗಳು
ಶುದ್ಧಸಿದ್ಧ ಪ್ರಸಿದ್ಧವ ಪ್ರವೇಶಿಸಿಪ್ಪವು.
ನಿನ್ನಾನಂದಸ್ಥಾನದಲ್ಲಿ ಅತಿಶಯವಪ್ಪ
ಬೀಜಾಕ್ಷರದ್ವಯಂಗಳುಂಟು.
ಅದರ ಮಹಾಪ್ರಭೆಯಲ್ಲಿ ಒಪ್ಪಿಪ್ಪ ಅವ್ಯಯ
ವಾಙ್ಮನಕ್ಕಗೋಚರನಾಗಿಪ್ಪ
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ
ನೋಡಿಹೆನೆಂಬ ಭರವಸೆ ಘನ,
ತೋರಾ ಎಲೆ ಅವ್ವಾ !
Transliteration Bhrūmadhyadiṁ mēle oppippa kannikeya
ninna jyōtirmayada beḷaga tōrā.
Ā beḷagina baḷagagaḷu
śud'dhasid'dha prasid'dhava pravēśisippavu.
Ninnānandasthānadalli atiśayavappa
bījākṣaradvayaṅgaḷuṇṭu.
Adara mahāprabheyalli oppippa avyaya
vāṇmanakkagōcaranāgippa
kapilasid'dhamallikārjunayyana
nōḍ'̔ihenemba bharavase ghana,
tōrā ele avvā!