•  
  •  
  •  
  •  
Index   ವಚನ - 848    Search  
 
ಮಂಗಳದ ಸಂಗ ಅಂಗಕ್ಕೆ ಮಚ್ಚಿದುದ ಹಿಂಗಿ ಹೇಳಲ್ಕಿದಕೆ ಜಿಹ್ವೆಯುಂಟೆ? ಈರಾರು ಸುಖಗಳನು ಮೇಲಾದ ಮಧುರವನು ಓರಂತೆ ಉಂಡುದಕೆ ಪ್ರಳಯವುಂಟೆ? ನಿಗಮಂಗಳರಿಯದಿಹ ಅಗಣಿತ ಮೆಟ್ಟದಾ ಶ್ರುತಿಯ ತಪ್ಪಲಲಿರ್ದ ನಿತ್ಯತೃಪ್ತಾ ಮೂರಾರು ಈರಾರು ತೋರಿರ್ಪ ನಿಶ್ಚಯದ ಆರರಿಂದಂ ಮೇಲೆ ಸಂಯೋಗವು ಸ್ವಾನುಭಾವದ ದೀಕ್ಷೆ ತಾನು ತನಗಳವಟ್ಟು ಹೇಳದೆ ಹೋದನಾ ಇರ್ದ ಮನೆಗೆ ಮೂರನು ಮುಟ್ಟದೆ ಆರನು ತಟ್ಟದೆ ಮೀರಿ ಉರವಣಿಸಿದನು ಸಾಯುಜ್ಯದಾ ಫಲಪದವನತಿಗಳೆದು ನಿಗಮಕ್ಕಭೇದ್ಯನ ಕಂಡೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Maṅgaḷada saṅgakke macciduda hiṅgi hēḷalkidake jihveyuṇṭe? Īrāru sukhagaḷanu mēlāda madhuravanu ōrante uṇḍudake praḷayavuṇṭe? Nigamagaḷariyadiha agaṇita meṭṭadā śrutiya tappalalirda nityatr̥ptā mūrāru īrāru tōrirpa niścayada ārarindaṁ mēle sanyōgavu svānubhāvada dīkṣe tānu tanagaḷavaṭṭu hēḷade hōdanā irda manege mūranu muṭṭade āranu taṭṭade mīri uravaṇisidanu sāyujyada phalapadavanatigaḷedu nigamakkabhēdyana kaṇḍe kapilasid'dhamallikārjunā.