ವಚನ - 852     
 
ಮಜ್ಜನಕ್ಕೆರೆಯ ಹೇಳಿದಡೆ ನಾನೇನ ಮಜ್ಜನಕ್ಕೆರೆವೆನು? ಒಳಗೊಂದು ಪ್ರಾಣಲಿಂಗವ ಕಂಡೆನಯ್ಯಾ. ಹೊರಗಣ ಹೂವ ಕೊಯ್ದು, ಹೊರಗನೆ ಮಜ್ಜನಕ್ಕೆರೆವರು; ಉಪಚಾರದ ನೇಮವ ನಾನೊಲ್ಲೆನಯ್ಯಾ. ಸ್ವಾನುಭಾವವನರಿಯದವನೇತರ ಸುಖಿಯೊ? ಕಪಿಲಸಿದ್ಧಮಲ್ಲಿನಾಥನರನನೊಲ್ಲನಯ್ಯಾ