•  
  •  
  •  
  •  
Index   ವಚನ - 897    Search  
 
ಮುಖವನರಿಯದೆಂತರ್ಪಿಸುವೆನಯ್ಯಾ? ಅದು ಭವ ಹರಿಯದು. ಅವಯವದ ಪರಿಯಾಣದಲ್ಲಿ ಅನಿಮಿಷವೆಂಬ ಓಗರವನಿಕ್ಕಿ, ತನುತ್ರಯದಿಂ ಮೇಲಣ ಆನಂದ ಕೋಣೆಯಲ್ಲಿ, ಅನಿಮಿಷಲಿಂಗಾರ್ಚನೆಯ ಮಾಡಬಲ್ಲಡೆ ಆತನನುಪಮ ಲಿಂಗಾರ್ಚಕನೆಂಬೆ; ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನೀನೆಂಬೆ.
Transliteration Mukhavanariyadentarpisuvenayyā? Adu bhava hariyadu. Avayavada pariyāṇadalli animiṣavemba ōgaravanikki, tanutrayadiṁ mēlaṇa ānanda koṭhaḍi, animiṣaliṅgārcaneya māḍaballaḍe ātananupama liṅgārcakanembe; kapilasid'dhamallikārjunayya, nīnembe.