•  
  •  
  •  
  •  
Index   ವಚನ - 918    Search  
 
ಮೂರರ ಫಲ ನೋಡಾ ಆರರಲ್ಲಿ ಭವಿಸಿತ್ತು ತೋರುತ್ತೈದೂದೆ ಶುದ್ಧಲೋಕ[ದ]ಲಿ. ಆ ಲೋಕದವರೆಲ್ಲ ಆಲೋಕನರ ಮಾಡಿ ಆದಿಮಧ್ಯಾವಸಾನಂಗಳಲ್ಲಿ ಭೇದಿಸುವ ಅವ್ವೆಯನು ನಾನೆಂಬ ಬಿಂದುವನು ತಾನು ತನ್ನಲ್ಲೀಯ ಒಂದಂಗದಲಿ ಅರಿತಿಹ ಭೇದವನು ಅರಿಯಲೀಯದೆ ಕೂಡಿ ತೆರಹುಗೆಟ್ಟ ಕಪಿಲಸಿದ್ಧಮಲ್ಲೇಶ್ವರ.
Transliteration Mūrara phala nōḍā āraralli bhāvisittu tōruttaidūde śud'dhalōka[da]li. Ā lōkadavarella ālōkanara māḍi ādimadhyavasānaṅgaḷalli bhēdisuva avveyanu nānemba binduvanu tānu tannallīya ondaṅgadali aritiha bhēdavanu ariyalīyade kūḍi terahugeṭṭa kapilasid'dhamallēśvara.