ಯಾವನ ಗತಿಯವನ ಮತಿಯಾನಪ್ಪೆ
ಅವ ನಿಂದಲ್ಲಿ ನಿಲುವೆ, ಅವ ಬಿಟ್ಟಡೆ ಬಿಡುವೆ,
ಅವ ಹಿಡಿಯಿತ್ತ ಹಿಡಿವೆ, ಬೆನ್ನ ಬಳಿಯ ಸಲುವೆ.
ಪ್ರಾಣವ ಮೇಲಿಕ್ಕಿ ನೆರವೆ ಕಪಿಲಸಿದ್ಧಮಲ್ಲಿನಾಥಯ್ಯನ.
Transliteration Yāvana gatiyavana matiyānappe
ava nindalli niluve, ava biṭṭaḍe biḍuve,
ava hiḍiyitta hiḍive, benna baḷiya saluve.
Prāṇava mēlikki nerave kapilasid'dhamallināthayyana