ವಚನ - 979     
 
ವಾರಾಸಿಯಿಂದತ್ತಲಾರು ಬಲ್ಲರು ದೇವಾ? ಈರೇಳನತಿಗಳೆದ ನಿತ್ಯ ನಿತ್ಯ ಕಾರುಣ್ಯಭಾವದಲಿ ಆ ಮರುಳುಗೊಂಡಡೆ ಆರು ಏವಿಧಿಯಾದಡೇನಯ್ಯ? ಕಾರುಣ್ಯಾಕರ ಕಪಿಲಸಿದ್ಧಮಲ್ಲೇಶ್ವರಾ ಓರಂತೆಯಾದ ಬಳಿಕಾನಂದನು.