ವಚನ - 991     
 
ಶರಣನಾದಡೆ ಸತಿಯ ಗೊಡ್ಡಾಟವೇಕಯ್ಯಾ? ಇಂದ್ರಿಯಂಗಳು ಹರಿಯಲೇಕೆ? ತಾನೆ ಸತಿ ಲಿಂಗವೆ ಪತಿಯಾದ ಬಳಿಕ. ಸರ್ವ ಸಂಯೋಗಕ್ಕೆ ಲಿಂಗವೆ ಪತಿ, ತಾನೆ ಸತಿಯಾದಾತ ಅನ್ಯ ಸತಿಯರಿಗೆರಗ; ಕರಣಂಗಳ ಹರಿಯಲೀಯ; ಕಾರ್ಪಣ್ಯಕ್ಕೊದಗ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಒಡಗೂಡಿದ ಶರಣ.