ವಚನ - 1002     
 
ಶ್ರೀಕರ ಬ್ರಹ್ಮಾದಿಗಳೇನು ಕಾರಣ ಯೋನಿ, ನಾನಾ ಭವಂಗಳಲಿ ಬಂದರಯ್ಯ. ಧ್ಯಾನ ಮೌನ ಸಮಾಧಿಕಾರಣದ ಸಮತೆಯನು ಭೇದಿಸಲು ಅರಿಯದೆ, ನಾನಾ ಭವಂಗಳಲಿ ಮಗ್ನವಾಗಿ, ಅನಾದಿ ಸಂಸಿದ್ಧ ಕಪಿಲಸಿದ್ಧಮಲ್ಲಿಕಾರ್ಜುನ ಆದಿಯಕ್ಷರ ಸಮತೆ ಸಮಗೂಡದು.