ವಚನ - 1006     
 
ಶುದ್ಧದಿಂದ ಸಿದ್ಧವನರಿತೆ, ಸಿದ್ಧದಿಂದ ಪ್ರಸಿದ್ಧವನರಿತೆ, ಒಂದರಿಂದ ಒಂದನರಿದೆ, ಎರಡರಿಂದ ಮತ್ತೊಂದನರಿದೆ. ಆ ಒಂದರೊಳಗೆ ಎರಡೆನ್ನದಿದ್ದಡೆ ನಿಮ್ಮಾಜ್ಞೆಗೆ ದೂರ ಕಪಿಲಸಿದ್ಧಮಲ್ಲಿಕಾರ್ಜುನಾ.