•  
  •  
  •  
  •  
Index   ವಚನ - 1009    Search  
 
ಶುದ್ಧಲಿಂಗವನು ಪ್ರಸಿದ್ಧ ಕರದಲಿ ಇಟ್ಟು ಶುದ್ಧ ಸಿದ್ಧ ಪ್ರಸಿದ್ಧ ಪಾವನಾಂಗವ ಮಾಡಿ ಹೊದ್ದಿದ ಪ್ರಪಂಚುವ ಕಳೆದು ನಿತ್ಯನೆನಿಸಿ ಸದ್ಯೋನ್ಮುಕ್ತನ ಮಾಡಿ ಕೈವಲ್ಯಪದವಿದೆಂದು ಆನಂದವ ಕರದಲ್ಲಿಟ್ಟು ಅರುಪಿದನಿದ ವಿಸ್ತಾರವೆಂದು ಎನ್ನ ಜನ್ಮ ಕರ್ಮ ನಿರ್ವರ್ತನೆಯ ಮಾಡಿದ ಗುರು ಚೆನ್ನಬಸವಣ್ಣನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Śud'dhaliṅgavanu prasid'dha karadali iṭṭu śud'dha sid'dha prasid'dha pāvanāṅgava māḍi hoddida prapan̄ca kaḷedu nityanenisi sadyōnmuktana māḍi kaivalyapadavidendu ānandava karadalliṭṭu arupidanida vistāravendu enna janma karma nirvartaneya māḍida guru cennabasavaṇṇanayya, kapilasid'dhamallikārjunā.