•  
  •  
  •  
  •  
Index   ವಚನ - 1011    Search  
 
ಶುದ್ಧಸಂಗಮದಲ್ಲಿ ಸಂಯೋಗವಾದಳವ್ವೆ, ಸಿದ್ಧ ಗುರುವಿನಲ್ಲಿ ನಿತ್ಯಳಾದಳವ್ವೆ, ಪ್ರಸಿದ್ಧ ಜಂಗಮದಲ್ಲಿ ಪ್ರಾಣಸಂಯೋಗವಾದಳವ್ವೆ. ಶುದ್ಧಸಿದ್ಧಪ್ರಸಿದ್ಧವ ಕೂಡಿದ ಪ್ರಕಟಿತ ಸಂಯೋಗದಲ್ಲಿ ಸಮನಿಸಿದಳವ್ವೆ. ಆಧಾರಮೂಲಪಂಚಿಕ ತೊಡಗಿ ಬಹುವಿಧ ನಾಳಂಗಳಿಗೆ ಸಹಸ್ರ ಮುಚ್ಚಳಂ ಮುಚ್ಚಿದಳವ್ವೆ. ಅಜ್ಞಾನವೆಂಬ ಬಿದ್ದಿನ ಬಂದಡೆ ಇಕ್ಕಲಿಲ್ಲದಚ್ಚಿಗಂಬಟ್ಟು ಉದಾಸೀನಂ ಮಾಡಿದವಳವ್ವೆ. ಸುಜ್ಞಾನವೆಂಬ ಆತಂಗೆ ನಿರ್ಮಳದಲೊಮ್ಮನವನಟ್ಟು, ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ನಿತ್ಯರ್ಪಿತವಂ ಮಾಡಿ, ಪ್ರಸಾದವ ಸ್ವೀಕಾರಂ ಮಾಡಿ ನಿತ್ಯಮುಕ್ತಳಾದಳವ್ವೆ.
Transliteration Śud'dhasaṅgamadalli sanyōgavādaḷavve, sid'dha guruvinalli nityaḷādaḷavve, prasid'dha jaṅgamadalli prāṇasanyōgavādaḷavve. Śud'dhasid'dhaprasid'dhava kūḍida prakaṭita sanyōgadalli samanisidaḷavve. Ādhāramūlapan̄cika toḍagi bahuvidha nāḷaṅgaḷige sahasra muccaḷaṁ muccidaḷavve. Ajñānavemba biddina bandaḍe ikkalilladaccigambaṭṭu udāsīnaṁ māḍidavaḷavve. Sujñānavemba ātaṅge nirmaladalom'manavanaṭṭu, kapilasid'dhamallikārjunayyanemba nityarpitavaṁ māḍi, prasādava svīkāraṁ māḍi nityamuktaḷādaḷavve.