•  
  •  
  •  
  •  
Index   ವಚನ - 1017    Search  
 
ಸಿರಿಯಾಯಿತ್ತೆಂದು ಉತ್ಸಾಹದಿಂದುಬ್ಬದೆ, ಕೆಟ್ಟಡೆ ಮನನೊಂದು ಖಿನ್ನವಾಗದಂತೆ ಇರಬೇಡಾ ಹಿರಿಯರ ಮನ ಮನವಿಚ್ಛಂದವಾಗದೆ ಒಂದೆಯಂದದಿ ಇಪ್ಪಂತಪ್ಪ ನಿಮ್ಮದೊಂದು ಸಮತೆಯ ಗುಣ ಎನ್ನನೆಂದು ಪೊಂದಿಪ್ಪುದು ಕಪಿಲಸಿದ್ಧಮಲ್ಲಿಕಾರ್ಜುನಾ
Transliteration [Siriyāyitendu] utsāhadindubbade, keṭṭaḍe mananondu khinnavāgadante irabēḍā hiriyara mana manavicchandavāgade ondeyandadi ippantappa nim'madondu samateya guṇa ennanendu pondippudu kapilasid'dhamallikārjunā