ವಚನ - 1030     
 
ಸಂಸಾರ ತೆಪ್ಪದೊಳಗೆ ಆನೀಗ ಅದ್ದಿ ಅಳಲುತ್ತ ಬಳಲುತಿಪ್ಪೆನಯ್ಯಾ, ಬೇಗ ಬಾರಾ ಬಾರಾ ಅಯ್ಯಾ, ವಜ್ರಲೇಪದಲಿ ಬಿದ್ದಿದ್ದೇನೆ ಬೇಗ ಬಂದೆತ್ತಯ್ಯಾ, ಹೆತ್ತಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.