ಸಂಸಾರದ ಅಣಲೊಳಗೆ ಇದ್ದೆನಯ್ಯಾ,
ಅಯ್ಯಾ, ಎನ್ನನಾವಾಗ ನುಂಗಿಹಿತೆಂದೆರಿಯೆನಯ್ಯಾ,
ಅಯ್ಯಾ, ಎನ್ನನಾವಾಗ ಮೆಲಿದೂತೆಂದರಿಯೆನು.
ಅದರ ಬಾಯೊಳಗಣಿಂದ ತೆಗೆದು ಎನ್ನ ಕಾಯಿ
ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Sansārada aṇaloḷage iddenayyā,
ayyā, ennanāvāga nuṅgihitenderiyenayyā,
ayyā, ennanāvāga melidūtendariyenu.
Adara bāyoḷagaṇinda tegedu enna kāyi
kapilasid'dhamallināthayya.