ಸಕಲ ನಿಃಕಲವ ಪೂಜಿಸಿಹೆನೆಂದೆಂಬೆ,
ಸಕಲವಾವುದು ನಿಃಕಲವಾವುದು ಹೇಳಾ.
ಸ್ವಾತಂತ್ರ್ಯವ ಮೀರಿಪ್ಪುದೀಗ ಸಕಲ;
ಪರಬ್ರಹ್ಮದ ಸೊಮ್ಮಾಗಿಪ್ಪುದೀಗ ಶಿವಯೋಗ!
ಈ ಪೂಜಾದ್ವಯವನರಿತ ಬಳಿಕ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ
ಕೂಡುವೆ ಸಂದಿಲ್ಲದೆ.
Transliteration Sakala niḥkalava pūjisihenendembe,
sakalavāvudu niḥkalavāvudu hēḷā.
Svātantrya mīrippudīga sakala;
parabrahmada som'māgippudīga śivayōga!
Ī pūjādvayavanarita baḷika,
kapilasid'dhamallikārjunayyana
kūḍuve sandillade.